ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind vs Ban: ಮಯಂಕ್ ಅಗರ್‌ವಾಲ್‌ ಆಕರ್ಷಕ ಶತಕ

Last Updated 15 ನವೆಂಬರ್ 2019, 8:36 IST
ಅಕ್ಷರ ಗಾತ್ರ

ಇಂದೋರ್: ಇಲ್ಲಿನಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾ ದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಮಯಂಕ್ ಅಗರವಾಲ್ ಆಕರ್ಷಕ ಶತಕ ಸಿಡಿಸಿದ್ದಾರೆ.

ನಿನ್ನೆ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ150 ರನ್‌ಗಳ ಅಲ್ಪಮೊತ್ತಕ್ಕೆಆಲೌಟ್ ಆಗಿತ್ತು. ಸಂಜೆಇನಿಂಗ್ಸ್‌ ಆರಂಭಿಸಿದ ಭಾರತ ತಂಡವು ದಿನದಾಟದ ಕೊನೆಗೆ 26 ಓವರ್‌ಗಳಲ್ಲಿ 1 ವಿಕೆಟ್‌ಗೆ 86 ರನ್ ಗಳಿಸಿತು. ಈ ವೇಳೆಮಯಂಕ್ ಅಗರವಾಲ್ 37 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದರು.

ಇಂದು ಆಟ ಮುಂದುವರೆಸಿದ ಮಯಂಕ್‌ ಉತ್ತಮ ಆಟ ಪ್ರದರ್ಶಿಸುವ ಮೂಲಕ ಭೋಜನ ವಿರಾಮದ ಬಳಿಕ ಆಕರ್ಷಕ ಶತಕ ಸಿಡಿಸಿದರು. 212 ಬಾಲ್‌ಗಳಲ್ಲಿ122 ರನ್‌ ಗಳಿಸಿ ವಯಂಕ್‌ ಆಡುತ್ತಿದ್ದಾರೆ. ಅಜಿಂಕ್ಯ ರಹಾನೆ ಕೂಡ ಅರ್ಧ ಶತಕ ದಾಖಲಿಸಿದ್ದಾರೆ. 8 ಟೆಸ್ಟ್‌ ಪಂದ್ಯಗಳಲ್ಲಿ ಶೇ 66.6ರ ಸರಾಸರಿಯಲ್ಲಿ 726 ರನ್‌ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ.

ಬೆಳಗ್ಗೆಚೇತೇಶ್ವರ್ ಪೂಜಾರ 54 ರನ್‌ಗಳಿಸಿ ಔಟಾದರೆ, ಕೊಹ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು.

ಇತ್ತೀಚಿನ ವರದಿ ಬಂದಾಗ( 1.30ರಸಮಯಕ್ಕೆ ) ಭಾರತ ತಂಡ 3 ವಿಕೆಟ್‌ ಕಳೆದುಕೊಂಡು 224 ರನ್‌ ಗಳಿಸಿದೆ. ಬಾಂಗ್ಲಾ ವಿರುದ್ಧ 81 ರನ್‌ಗಳ ಲೀಡ್‌ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT